ಸುದ್ದಿ ಮಾಧ್ಯಮದಲ್ಲಿ

ಕನ್ನಡ ಗ್ರಾಹಕರ ಕೂಟ ಹಾಗು ಕರ್ನಾಟಕದಲ್ಲಿ ನಡೆಯುತ್ತಿರುವ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಬಗ್ಗೆ ಮೊರವಿಯ ಮಿಂಬಾಗಿಲಿನಲ್ಲಿ 24 ಆಗಸ್ಟ್ 2016 ರಂದು ಮೂಡಿಬಂದ ಅಂಕಣ. ನಿಮ್ಮೆಲ್ಲರ ಓದಿಗಾಗಿ: http://info.moravia.com/blog/language-as-a-consumer-right-in-india-yes-the-day-is-near-deep-dive

“ಅಂಗಡಿಯಲ್ಲಿ ಕನ್ನಡ ನುಡಿ” ಹಾಗೂ ಕನ್ನಡ ಗ್ರಾಹಕರ ಕೂಟದ ಬಗ್ಗೆ Feb 22 2016 ರ ಪ್ರಜಾವಾಣಿ ಪತ್ರಿಕೆಯಲ್ಲಿ ಮೂಡಿ ಬಂದ ಅಂಕಣ ಇಲ್ಲಿದೆ:

“ಕನ್ನಡ ಕಲಿಸಲು ಮತ್ತು ಕಲಿಯಲು ಬಯಸುವವರ” ನಡುವಿನ ಅಂತರವನ್ನು ತುಂಬುವ ದೃಷ್ಟಿಯಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ “ಕಲಿ ಕನ್ನಡ/Learn Kannada” ಎಂಬ ಟ್ವಿಟ್ಟರ್ ಅಭಿಯಾನವನ್ನು May 2015 ರಂದು ಶುರುಮಾಡಲಾಗಿತ್ತು. ಇದರ ಬಗ್ಗೆ 23 ಜುಲೈ 2015ರ ಪ್ರಜಾವಾಣಿ ಸುದ್ದಿ ಹಾಳೆಯ “ಕಾಮನಬಿಲ್ಲು” ಸಪ್ಲಿಮೆಂಟ್ ನಲ್ಲಿ ಮೂಡಿಬಂದಿದೆ. ಓದಿ ಹಂಚಿಕೊಳ್ಳಿ, ಹಾಗೆ “ಕಲಿ ಕನ್ನಡ/Learn Kannada”ವನ್ನು, ನೀವು ಇಲ್ಲಿ ಹಿಂಬಾಲಿಸಬಹುದು: https://twitter.com/KaliKannada

30 ಅಕ್ಟೋಬರ್ 2014ರ ಪ್ರಜಾವಾಣಿ ಪತ್ರಿಕೆಯ ಕಾಮನಬಿಲ್ಲು ವಿಶೇಷಾಂಕಣದಲ್ಲಿ “ಕನ್ನಡ ಕೇಂದ್ರಿತ ಭಾಷಾ ಚಳವಳಿಯ(Kannada Language Centric Consumer Movement)” ಮಹತ್ವದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ನಮ್ಮ ಕನ್ನಡ ಗ್ರಾಹಕರ ಕೂಟ ಹಾಗು ಮತ್ತದರ ಅಂಗಡಿಯಲ್ಲಿ ಕನ್ನಡ ನುಡಿ ಫೇಸ್ಬುಕ್ ಪುಟದ ಬಗ್ಗೆ ಮೂಡಿ ಬಂದಿತ್ತು. ಓದಿ ಹಂಚಿಕೊಳ್ಳಿ.

೨೧-೦೩-೨೦೧೩ ರ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಕನ್ನಡ ಗ್ರಾಹಕರ ಕೂಟದ ಬಗ್ಗೆ ಹಾಗೂ ಅಂಗಡಿಯಲ್ಲಿ ಕನ್ನಡನುಡಿಯ ಬಗ್ಗೆ ವರದಿ ಇಲ್ಲಿದೆ.