ಕೈಜೋಡಿಸಿ

ಕನ್ನಡ ಗ್ರಾಹಕರ ಕೂಟ ಎಲ್ಲ ಕನ್ನಡಿಗರಲ್ಲಿ ಗ್ರಾಹಕ ಪ್ರಜ್ಞೆಯನ್ನು ಬಿತ್ತುವ ಜೊತೆಗೆ ಕನ್ನಡತನವನ್ನೂ ಜಾಗೃತಗೊಳಿಸುವ ವೇದಿಕೆಯಾಗಿ ಕೆಲಸ ನಿರ್ವಹಿಸುತ್ತಿದ್ದು, ಕನ್ನಡ ಗ್ರಾಹಕರು ತಾವು ವ್ಯವಹರಿಸುವ ದೈನಂದಿನ ವ್ಯಾಪಾರ ವಹಿವಾಟಿನಲ್ಲಿ ಕನ್ನಡದಲ್ಲೇ ಸೇವೆ ಪಡೆದ ಅನುಭವಗಳು ಮತ್ತು ಕನ್ನಡದಲ್ಲಿ ಸೇವೆ ಪಡೆಯಲಾಗದ ಅನುಭವಗಳು, ಅಂತಹ ಅನುಭವಗಳಿಗೆ ಸಂಬಂಧಪಟ್ಟವರ ಮಾಹಿತಿ, ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯಲು ಅನುಕೂಲವಾಗುವ ಹಲವಾರು ಗ್ರಾಹಕ ಹಕ್ಕುಗಳು, ಕಾನೂನು ನಿಯಮಗಳು ಇತ್ಯಾದಿಯನ್ನು ಇತರರೊಡನೆ ಹಂಚಿಕೊಳ್ಳಲು ಕೆಲ ವೇದಿಕೆಗಳನ್ನು ಕಲ್ಪಿಸಿದೆ.

ಮುಖ್ಯವಾಗಿ, ಗ್ರಾಹಕ ಪ್ರಜ್ಞೆಯನ್ನು ಕನ್ನಡಿಗರಲ್ಲಿ ಬಿತ್ತಲು ಮತ್ತು ಆ ಮೂಲಕ ಅವರು ಮಾರುಕಟ್ಟೆಯಲ್ಲಿ ಏನೇ ಖರೀದಿಸುವಾಗಲೂ ಕನ್ನಡದಲ್ಲೇ ವ್ಯವಹರಿಸುವಂತಹ ಜಾಗೃತಿ ತುಂಬುವ ಪ್ರಯತ್ನವನ್ನು ಜಾಗೃತ ಗ್ರಾಹಕರು” ಎನ್ನುವ ಗೂಗಲ್ ಗುಂಪಿನ ಮೂಲಕ ಕಳೆದ ೪ ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ. ಇದೇ ಚಿಂತನೆಯನ್ನು ಇತರ ಸಾಮಾಜಿಕ ಸಂಪರ್ಕ ತಾಣಗಳಲ್ಲೂ ಹರಡುವ ಉದ್ದೇಶದಿಂದ ಅಂಗಡಿಯಲ್ಲಿ ಕನ್ನಡ ನುಡಿ” ಅನ್ನುವ ಫೇಸ್ ಬುಕ್ ಪುಟವನ್ನು ಕೂಡ ಮಾಡಲಾಗಿದ್ದು, ಅಲ್ಲಿ ಗ್ರಾಹಕರು ಕನ್ನಡದಲ್ಲೇ ಸೇವೆ ಪಡೆದ, ಪಡೆಯಲಾಗದ ತಮ್ಮ ಅನುಭವ ಹಂಚಿಕೊಳ್ಳುವುದರ ಜೊತೆಗೆ ಒಟ್ಟಾಗಿ, ಒಂದಾಗಿ ಗ್ರಾಹಕರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡು, ಬದಲಾವಣೆಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಈ ಕನ್ನಡ ಗ್ರಾಹಕರ ಚಳವಳಿಗೆ ನೀವು ಹೇಗೆ ಕೈಜೋಡಿಸಬಹುದು?

ಕನ್ನಡದ ಗ್ರಾಹಕರಾಗಿ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯ ತನ್ನಿ. ಆ ಒತ್ತಾಯವನ್ನು ಕಂಪನಿಗಳಿಗೆ, ಅಂಗಡಿಗಳಿಗೆ, ಜಾಹೀರಾತು ಮಾಡುವ ಕಂಪನಿಗಳಿಗೆ ತಲುಪಿಸಿ, ಇವೆಲ್ಲವುಗಳ ತಮ್ಮ ಅನುಭವಗಳನ್ನು ಮೇಲೆ ತಿಳಿಸಿದ ಸಾಮಾಜಿಕ ತಾಣಗಳಲ್ಲಿ ಇತರ ಕನ್ನಡಿಗರೊಡನೆ ಹಂಚಿಕೊಳ್ಳಿ.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಜೊತೆಗೂಡಲು ಕೆಳಗಿನ ಕೊಂಡಿಗಳನ್ನು ಒತ್ತಿ 

http://www.facebook.com/Angadiyalikannadanudi

https://twitter.com/KannadaGrahaka?