ಹಿಂದಿ ಹೇರಿಕೆ – ರಾಜಭಾಶಾ ಆಯೋಗ ವರದಿ ಏನು ಹೇಳತ್ತೇ!

ಇತ್ತೀಚಿಗೆ ಮರು ಪರಿಶ್ಕರಿಸಿ ಬಂದ ರಾಜಭಾಶಾ ಆಯೋಗದ ವರದಿಯಲ್ಲಿ 2020-21 ನೇ ಸಾಲಿನಲ್ಲಿ ಭಾರತದಾದ್ಯಂತ ರಾಜಭಾಶೆ – ಹಿಂದಿಯನ್ನು ನಾಗರೀಕ ಆಡಳಿತದಲ್ಲಿ ಹೇಗೆ ಪ್ರಚಾರ ಪಡಿಸಬೇಕು, ಹಿಂದಿ ಬಳಕೆಯನ್ನು ಹೇಗೆ ತೀವ್ರಗೊಳಿಸಬೇಕು ಎಂಬುದರ ಬಗ್ಗೆ ಉಲ್ಲೇಖಿಸಿರುವ ಕೆಲವು ಅಂಶಗಳು ಹೀಗಿವೆ:
1. ಮೊದಲನೆಯದಾಗಿ, ರಾಜಭಾಶಾ ಆಯೋಗದಲ್ಲಿರುವ ರಾಜ್ಯಗಳ ವರ್ಗೀಕರಣ ಮುಂದುವರಿಯಲಿದೆ. ಅದರ ಪ್ರಕಾರ ಪಟ್ಟಿಗಳು ಹೀಗಿವೆ:
A- ಬಿಹಾರ, ಚತ್ತಿಸ್ಗಡ್, ಹಿಮಾಚಲ ಪ್ರದೇಶ, ಜಾರ್ಕಂಡ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಉತ್ತರಾಕಂಡ್, ದೆಹಲಿ, ಅಂಡಮಾನ್ ನಿಕೋಬಾರ್ ದ್ವೀಪಗಳು.
B – ಗುಜರಾತ್, ಮಹಾರಾಶ್ಟ್ರ, ಪಂಜಾಬ್, ಚಂಡೀಗಡ್, ದಾಮನ್, ಡಿಯು, ದಾದ್ರ ಮತ್ತು ನಗರ್ ಹವೇಲಿ.
C – A ಮತ್ತು B ಪಟ್ಟಿಯಲ್ಲಿ ಕಾಣಿಸದ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು.
2. ಭಾರತದ ಆಡಳಿತದಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಾಗಿದ್ದರೂ
ಗುರಿ ಇನ್ನೂ ತಲುಪಿಲ್ಲ. ಇನ್ನೂ ಸಾಕಶ್ಟು ಕಡೆ ಇಂಗ್ಲೀಶ್ ಬಳಕೆಯಾಗುತ್ತಿದೆ. ನಮ್ಮ ಉದ್ದೇಶ ಆಡಳಿತದ ಪ್ರತಿಯೊಂದು ಕಡೆ ಹಿಂದಿ ಬಳಕೆಯಾಗಬೇಕು. ಜನರ ಭಾಶೆಯಲ್ಲಿ ಆಡಳಿತ ನಡೆಸುದರಿಂದ, ಅಭಿವೃದ್ದಿಯ ವೇಗ ಮತ್ತು ಪಾರದರ್ಶಕತೆ ಹೆಚ್ಚಾಗುತ್ತದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.
3. ರಾಶ್ಟ್ರಪತಿಯ ಅನುಮೋದನೆ ಇರುವ ಆಡಳಿತ ಭಾಶೆಗೆ ಸಂಬಂದಿಸಿದ 9 ಕಡತಗಳನ್ನು ಎಲ್ಲಾ ಸಚಿವರ ಕಾರ್ಯಾಲಯಗಳು, ಕಚೇರಿಗಳು & ಆಫೀಸ್ ಗಳು ಅಗತ್ಯವಾಗಿ ಬಳಸಬೇಕು.
4. ಕಂಪ್ಯೂಟರ್, ಇಮೇಲ್, ವೆಬ್ಸೈಟ್ ಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸಬೇಕು.
5. ಎಲ್ಲಾ ಕೇಂದ್ರದ ಆಡಳಿತಾತ್ಮಕ ಇಲಾಖೆಗಳಲ್ಲಿ ವಿಜ್ನಾನ, ತಂತ್ರಜ್ನಾನ ಸಂಬಂದಿತ ಹಿಂದಿ ಬರಹಗಳನ್ನು ಬರೆಸಬೇಕು.
6.2025 ರ ಹೊತ್ತಿಗೆ ಹಿಂದಿ ತರಬೇತಿ ಕಾರ್ಯಕ್ರಮ ಕೊನೆಗೊಳ್ಳುದರಿಂದ, ಅಶ್ಟರ ಒಳಗೆ ಕೇಂದ್ರ ಕಚೇರಿಗಳಲ್ಲಿ ಹಿಂದಿ , ಹಿಂದಿ ಟೈಪಿಂಗ್ / ಶೀಘ್ರಲಿಪಿ ಕಲಿಕೆಯನ್ನು ಪೂರ್ಣಗೊಳಿಸತಕ್ಕದ್ದು.
7. ಎಲ್ಲಾ ಸಚಿವಾಲಯಗಳು, ಕೇಂದ್ರದ ಇಲಾಖೆಗಳು, ಕಚೇರಿಗಳು, ತಮ್ಮಲ್ಲಿರುವ ಕಂಪ್ಯೂಟರ್ ವ್ಯವಸ್ತೆಯನ್ನು ಲಿಲಾ ಹಿಂದಿ ಪ್ರಬೊದ್, ಪ್ರವೀಣ್ ಪ್ರಗ್ಯಾ ಎಂಬ ತಂತ್ರಾಂಶದ ಮುಖೇನ ನೌಕರರಿಗೆ ಹಿಂದಿ ಕಲಿಕೆಗೆ ಅನುವು ಮಾಡಿಕೊಡಬೇಕು.
8. ಎಲ್ಲಾ ಸಚಿವಾಲಯಗಳು, ಇಲಾಖೆಗಳು ನೌಕರರಿಗೆ ತಮ್ಮ ತಮ್ಮ ತರಬೇತಿ ಕೇಂದ್ರಗಳನ್ನು ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಅಕಾಡೆಮಿಯಂತೆ ಹಿಂದಿ ಕಲಿಕೆಗೆ ಯೋಗ್ಯಗೊಳಿಸಬೇಕು.
9. ಎಲ್ಲಾ ಕೇಂದ್ರದ ಸಚಿವಾಲಯಗಳು,ಇಲಾಖೆಗಳು,ಕಚೇರಿಗಳು ಹಿಂದಿಯಲ್ಲಿ ಸೆಮಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.
10. ಕೇಂದ್ರದ ಮತ್ತು ಕೇಂದ್ರಸ್ವಾಮ್ಯದ ಕಚೇರಿಗಳಲ್ಲಿ, ಆಡಳಿತ ಭಾಶೆಯ ಅನುಶ್ಟಾನದ ಬಗ್ಗೆ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು.
11. ಪ್ರತಿಯೊಂದು ಕೇಂದ್ರದ ಮತ್ತು ಕೇಂದ್ರಸ್ವಾಮ್ಯದ ಆಫೀಸ್, ಕಚೇರಿಗಳು ವರ್ಶಕ್ಕೆ ಐದು ಬಾರಿ( ಮೂರು ತಿಂಗಳಿಗೊಮ್ಮೆ+ ವರ್ಶದ ಕೊನೆಗೆ) ಅಧಿಕೃತ ಭಾಶೆಯ ಅನುಶ್ಟಾನದ ಪ್ರಗತಿಯ ಬಗೆಗಿನ ವರದಿಯನ್ನು ರಾಜಭಾಶಾ ಆಯೋಗಕ್ಕೆ ಸಲ್ಲಿಸಬೇಕು.
12. ಕೇಂದ್ರ ಸ್ವಾಮ್ಯದ ಕಚೇರಿಗಳಿಗಾಗಿ, ಬ್ಯಾಂಕ್ ಹಾಗೂ ಇನ್ನಿತರ ಯಾವುದೇ ಕೇಂದ್ರ ಸರಕಾರದ ನೇಮಕಾತಿಯಲ್ಲಿ ಇಂಗ್ಲೀಶ್ ಭಾಶೆಯ ವಿಶಯ ಒಂದನ್ನು ಬಿಟ್ಟು ಬೇರೆಲ್ಲಾ ಪರೀಕ್ಶೆಗಳಲ್ಲಿ ಅಭ್ಯರ್ಥಿ/ವಿದ್ಯಾರ್ಥಿಗೆ ಹಿಂದಿಯಲ್ಲಿ ಉತ್ತರಿಸಲು ಅವಕಾಶ ಇರಬೇಕು. ಪ್ರತಿಯೊಂದು ಪ್ರಶ್ನೆಪತ್ರಿಕೆ ಹಿಂದಿ ಮತ್ತು ಇಂಗ್ಲೀಶ್ ನಲ್ಲಿರ ತಕ್ಕದ್ದು. ಮೌಖಿಕ ಪರೀಕ್ಶೆಯಲ್ಲಿ ಅಭ್ಯರ್ಥಿಗೆ ಹಿಂದಿಯಲ್ಲಿ ಉತ್ತರಿಸಲು ಅವಕಾಶ ಇರಬೇಕು.
13. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ವಿಜ್ನಾನಿಗಳಿಗೆ ಹಿಂದಿಯಲ್ಲೇ ಸೆಮಿನಾರ್ ಕೊಡಲು ಉತ್ತೇಜಿಸಬೇಕು.
14. A ಮತ್ತು B ರಾಜ್ಯಗಳಲ್ಲಿ ಎಲ್ಲಾ ತರಬೇತಿಗಳು ಹಿಂದಿಯಲ್ಲೇ ನಡೆಯಬೇಕು. C ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಶ್ ಭಾಶೆಯಲ್ಲಿ ತರಬೇತಿಗೆ ಅವಕಾಶ ಇರಬೇಕು.
15. ಕೇಂದ್ರ ಕಚೇರಿಗಳಲ್ಲಿ ಎಲ್ಲಿಯ ತನಕ ಹಿಂದಿ ಟೈಪಿಸ್ಟ್ ಗಳ ಸಂಖ್ಯೆ ಗುರಿ(4೦%) ಮುಟ್ಟುದಿಲ್ಲವೋ ಅಲ್ಲಿಯ ತನಕ ಹಿಂದಿ ಟೈಪಿಸ್ಟ್ ಗಳನ್ನು ಮಾತ್ರ ನೇಮಿಸುತ್ತಾ ಇರಬೇಕು.
16. ಪ್ರತಿಯೊಂದು ಅಂತರರಾಶ್ಟೀಯ ಕರಾರು ಒಪ್ಪಂದಗಳು ಹಿಂದಿ ಮತ್ತು ಇಂಗ್ಲೀಶ್ ನಲ್ಲಿರಬೇಕು.
17. ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಪ್ರತಿಯೊಂದು ಬೋರ್ಡ್, ನಾಮಫಲಕಗಳು, ನೋಟಿಸ್ ಬೋರ್ಡ್, ಸ್ಟ್ಯಾಂಪ್ ಗಳು, ಆಹ್ವಾನ ಕರೆಯೋಲೆಗಳು – ರಾಜ್ಯ ಭಾಶೆ, ಹಿಂದಿ ಹಾಗೂ ಇಂಗ್ಲೀಶ್ ನಲ್ಲಿರಬೇಕು( ಇದೇ ಕ್ರಮದಲ್ಲಿ)
18. A ರಾಜ್ಯಗಳು C ರಾಜ್ಯಗಳಿಗೆ ಯಾವುದೇ ರೀತಿಯ ಪತ್ರ ಅಥವಾ ಎಲೆಕ್ಟ್ರಾನಿಕ್ ಪತ್ರ ವ್ಯವಹಾರ ನಡೆಸುವಾಗ 65% ಹಿಂದಿ ಬಳಸಬೇಕು. C ರಾಜ್ಯಗಳು ತಮ್ಮ ತಮ್ಮಲ್ಲಿಯೇ ವ್ಯವಹರಿಸುವಾಗ 55% ರಶ್ಟು ಹಿಂದಿ ಬಳಸಬೇಕು.
19. ಪ್ರತಿ ರಾಜ್ಯಗಳು ಹಿಂದಿಯಲ್ಲಿ ಸ್ವೀಕರಿಸಿದ ಪತ್ರಕ್ಕೆ ಹಿಂದಿಯಲ್ಲೇ ಉತ್ತರಿಸುವುದು ಕಡ್ಡಾಯ.
20. C ರಾಜ್ಯಗಳಲ್ಲಿನ ಕೇಂದ್ರದ ಕಚೇರಿಗಳಲ್ಲಿ ನಡೆಯುವ ಒಟ್ಟು ತರಬೇತಿಗಳಲ್ಲಿ 30 ಶೇಕಡಾ ತರಬೇತಿಗಳು ಹಿಂದಿ ಮಾಧ್ಯಮದಲ್ಲಿರಬೇಕು.

ಮಾಹಿತಿ ಮೂಲ :

https://rajbhasha.gov.in/sites/default/files/annual_programme2020-21_1.pdf?fbclid=IwAR3VSa6IVk3DY5TCYRpIy1eP9RSZPWcZzExjsuEsOkuxyvxayjS1PGxUg_4

Leave a Reply

Your email address will not be published. Required fields are marked *