ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೇಗೆ ?ಏನು ?

ಅಂದು 2013 ಆರಂಭದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಸ್ಟಾರ್ ಸ್ಪೋರ್ಟ್ಸ್ ಬೇಕೆಂದು ಬಹಳಷ್ಟು ಕನ್ನಡ ಗ್ರಾಹಕರು ಮಿಂಚೆ ಮೂಲಕ ಸ್ಟಾರ್ ಸ್ಪೋರ್ಟ್ಸ್ ಅವರಿಗೆ  ಬೇಡಿಕೆ ಇಡಲು ಶುರು ಮಾಡಿದರು. ಮೊದಮೊದಲು ಬೇರೆ ಕಂಪನಿಗಳಿಂದ ಬರುವ ಹಾಗೆ ಸ್ಟ್ಯಾಂಡರ್ಡ್ ಉತ್ತರ  ಬರುತ್ತಾ ಇದ್ದವು .
ಆದರೆ  2013 ನೇ ನವೆಂಬರ್ ನಲ್ಲಿ ಒಂದು ಸಂದರ್ಶನದಲ್ಲಿ ಸ್ಟಾರ್  ಸ್ಪೋರ್ಟ್ಸ್ ನವರು ಕ್ರಿಕೆಟ್ ಅನ್ನು ಇಂಗ್ಲೀಷ್/ಹಿಂದಿಯೇತರ ಭಾಷಿಕರಿಗೂ ಹೆಚ್ಚಿನ ರೀತಿಯಲ್ಲಿ ತಲುಪುವ ಯೋಚನೆಯಿಂದ ಕನ್ನಡದಲ್ಲೂ ಸಹ ಸೇವೆ ಕೊಡುವುದರ ಬಗ್ಗೆ ಹೇಳಿದ್ದರು.

 

ಇದನ್ನು ಗಮನಿಸಿದ ಬಹಳಷ್ಟು ಕನ್ನಡ ಗ್ರಾಹಕರು ಸ್ಟಾರ್ ಸ್ಪೋರ್ಟ್ಸ್ ನವರಿಗೆ ಮತ್ತೆ ಕನ್ನಡದಲ್ಲಿ ಸೇವೆ ಬೇಗ ಕೊಡುವುದರ ಬಗ್ಗೆ ಬಹಳಷ್ಟು ಮಿಂಚೆ/ಟ್ವೀಟ್ ಮೂಲಕ ಬೇಡಿಕೆ ಇಡುತ್ತಲೇ ಬಂದಿದ್ದರು. ಸುಮಾರು ಮೂರ್ನಾಲಕ್ಕು ವರ್ಷಗಳ ಕಾಲ ಹಿಂದಿಯೇತರ ಭಾಷೆಗಳಲ್ಲಿ ಸ್ಟಾರ್ಟ್ ಸ್ಪೋರ್ಟ್ಸ್ ಶುರು ಮಾಡುವುದರ ಬಗ್ಗೆ ಏನು ಸುದ್ದಿ ಇರಲೇ ಇಲ್ಲ.
ಮೊದಲ ಯಶಸ್ಸಿನ ಮೆಟ್ಟಿಲು –
  ಆದರೆ 2017 ರ ಮೇ ತಿಂಗಳಿನಲ್ಲಿ ಸ್ಟಾರ್ ಸ್ಪೋರ್ಟ್ಸ್ ಮೊದಲ ಹಿಂದಿ/ಇಂಗ್ಲಿಷ್ ಯೇತರ ಚಾನೆಲ್ ಅನ್ನು ತಮಿಳಿನಲ್ಲಿ ಶುರುಮಾಡಿತು. ಇದರಿಂದ ಕನ್ನಡ ಚಾನೆಲ್ ಬರುವುದರ ಬಗ್ಗೆ ಹೆಚ್ಚು ಭರವಸೆ ಮೂಡತೊಡಗಿತು.

ಕನ್ನಡ ಗ್ರಾಹಕರಿಗೆ ಸಿಕ್ಕ ಜಯ –
ಸತತ ಐದು ವರ್ಷಗಳ ಒತ್ತಾಯದಿಂದ ಕೊನೆಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ತನ್ನ ಸೇವೆ ಆರಂಭಿಸಿತು. ಡಿಸೆಂಬರ್ 2018 ರಿಂದ ಕನ್ನಡ ಚಾನೆಲ್ ಕನ್ನಡಿಗರಿಗೆ ನೋಡಲು ಲಭ್ಯವಾಯಿತು.ಇಷ್ಟು ವರ್ಷಗಳು ವಿಧಿಯಿಲ್ಲದೆ ಕನ್ನಡೇತರ ಭಾಷೆಯಲ್ಲಿ commentary ಹಾಗು ಆಟದ/ಆಟಗಾರರ ಮಾಹಿತಿಗಳನ್ನು ನೋಡಿ ಬೇಸತ್ತಿದ್ದ ಕನ್ನಡಿಗರು ಕೊನೆಗೂ ಕನ್ನಡದಲ್ಲಿ ಎಲ್ಲವನ್ನೂ ನೋಡಿ ಬಹಳ ಖುಷಿಪಟ್ಟರು.

ಸ್ಟಾರ್ ಸ್ಪೋರ್ಟ್ಸ್ ಗೆ ಕನ್ನಡದ ಮಾರುಕಟ್ಟೆಯಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸು –
2018 ರ ಐಪಿಎಲ್ ನಲ್ಲಿ ಕನ್ನಡ, ತೆಲುಗು,ಮಲಯಾಳಂ ಹಾಗು ತಮಿಳ್ ವೀಕ್ಷಕರು ಅವರವರ ಭಾಷೆಯಲ್ಲಿ ನೋಡಿ ಸ್ಟಾರ್ ಸ್ಪೋರ್ಟ್ಸ್ ಗೆ ಹಿಂದಿಯೇತರ ಮಾರುಕಟ್ಟೆಗೆ ಇರುವ ಬೇಡಿಕೆಯನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟರು. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ‌.೨೦೧೭ ಮತ್ತು ೨೦೧೮ ರ ಡೇಟಾ ಹೋಲಿಕೆ ಮಾಡಿ ನೋಡಿದರೆ ಗಣನೀಯವಾಗಿ ಇಂಗ್ಲಿಷ್ / ಹಿಂದಿಯೇತರ ನುಡಿಗಳಲ್ಲಿ ಸ್ಟಾರ್ ಸ್ಪೋರ್ಟ್ಸ್ ನೋಡುಗರ ಸಂಖ್ಯೆ  ಬಹಳಷ್ಟು ಏರಿಕೆ ಕಂಡಿತು.
1. ಸ್ಯಾಂಪಲ್ ಸರ್ವೇ ಪ್ರಕಾರ 57 % ಕನ್ನಡಿಗರು ಕನ್ನಡದಲ್ಲೇ ನೋಡಲು ಇಚ್ಚಿಸುವುದಾಗಿ ತಿಳಿಸಿದ್ದರು.
2. ಬಾರ್ಕ್(BARC) ಡೇಟಾ ಪ್ರಕಾರ ಕನ್ನಡದಲ್ಲಿ ನೋಡುಗರ ಸಂಖ್ಯೆ  36% ಏರಿಕೆ ಕಂಡಿತು.
3. ಹಾಟ್ ಸ್ಟಾರ್ ನ ನೋಡುಗರ ಸಂಖ್ಯೆ 41% ಏರಿಕೆ ಕಂಡಿತು.
ಈ ಎಲ್ಲ ಮಾಹಿತಿ ಕನ್ನಡದ ಮಾರುಕಟ್ಟೆ ಎಷ್ಟು ದೊಡ್ಡದಿದೆ ಹೆಚ್ಚು ಕನ್ನಡ ಗ್ರಾಹಕರು ತಲುಪಬಹುದು ಎಂದು ಎತ್ತಿ ತೋರಿಸುತ್ತಿದೆ.

ಕನ್ನಡದಲ್ಲಿ ಚಾನೆಲ್ ನಿಂದ ಕನ್ನಡಿಗರಿಗೆ ಆದ ಅನುಕೂಲ –
1. ಕನ್ನಡಿಗರು ತಮಗೆ ಅರ್ಥವಾಗುವ ಭಾಷೆಯಲ್ಲಿ commentary ಹಾಗು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದರಿಂದ ಆಟವನ್ನು ಹೆಚ್ಚಾಗಿ ಎಂಜಾಯ್ ಮಾಡಬಹುದು
2. ಬಹಳಷ್ಟು ಕನ್ನಡಿಗರಿಗೆ ಸಿಕ್ಕ ಉದ್ಯೋಗವಕಾಶಗಳು
3. ನಮ್ಮ ಕನ್ನಡ celebrity ಗಳ ಕಂಠದಲ್ಲಿ commentary ಕೇಳುವುದು. ಇದರಿಂದ ನಮ್ಮ ಯುವಕ/ಯುವತಿಯರಿಗೆ ಕನ್ನಡ ಮಾತನಾಡುವುದರ ಬಗ್ಗೆ ಇರುವ ಕೀಳರಿಮೆ ಕಮ್ಮಿ ಆಗುತ್ತದೆ
4. ಕನ್ನಡದ ಮಾರುಕಟ್ಟೆಗೆ ಇರುವ ಬೇಡಿಕೆಯನ್ನು ನೋಡಿ ಬೇರೆ ಚಾನೆಲ್ಗಳಾದ Nat Geo, Discovery, History ಹಾಗು ಇನ್ನೂ ಹಲವು ಚಾನಲ್ಗಳು ಕನ್ನಡದಲ್ಲಿ ತಮ್ಮ ಸೇವೆಯನ್ನು ಕೊಡಲು ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ

ಈ ಜರ್ನಿಯಿಂದ ನಾವು ತಿಳಿಯಬೇಕಾಗಿರುವುದು –
1.ಸರಿಯಾದ ರೀತಿಯ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯಿಂದ ಎಲ್ಲೆಡೆ ಕನ್ನಡಲ್ಲಿ ಸೇವೆಯನ್ನು ಪಡೆಯಬಹುದು.
2. ಚಾನೆಲ್ ಒಂದನ್ನು ಕನ್ನಡದಲ್ಲಿ ತರುವು ಕೆಲಸ ಕೆಲವು ಕನ್ನಡ ಗ್ರಾಹಕರ ಮಿಂಚೆ/ಟ್ವೀಟ್ ಇಂದ ಆಗುತ್ತದೆ ಅಂದ್ರೆ, ಬೇರೆ ಕಡೆಗಳಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಸುಲಭವಿದೆ.
3. ಕನ್ನಡ ಮಾರುಕಟ್ಟೆಯಲ್ಲಿ ದೊಡ್ಡ ಲಾಭವಿದೆ
ನೀವು ಇನ್ನೂ ಕನ್ನಡದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೋಡುತ್ತಿಲ್ಲ ಅಂದ್ರೆ ಈಗಲೇ ನೋಡಿ ಹಾಗು ಕನ್ನಡ ಚಾನಲ್ ಅನ್ನು ಬೆಂಬಲಿಸಿ‌. ನಿಮ್ಮ ಕೇಬಲ್/ DTH  ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಕನ್ನಡದಲ್ಲಿ ಸಿಗುತ್ತಿಲ್ಲವೆಂದರೆ ಅವರಿಗೆ ದೂರು ನೀಡಿ ಕನ್ನಡದಲ್ಲಿ ಬೇಕೆಂದು ಒತ್ತಾಯಿಸಿ.

-ಅಜಯ್  ಅ ಕುಮಾರ್

One thought on “ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೇಗೆ ?ಏನು ?

 • August 19, 2019 at 4:05 pm
  Permalink

  ನಿಜ. ಕನ್ನಡ ಬೇಡಿಕೆ ಇದ್ದರೆ ಮಾತ್ರ ಇದು ಸಾಧ್ಯ.
  ಕನ್ನಡದಲ್ಲೇ ಕ್ರೀಡಾ ಕಾರ್ಯಕ್ರಮ ನೋಡುವುದು ಮನಕ್ಕೆ ಮೊದ ನೀಡುತ್ತದೆ.

  ಶುಭ ಹಾರೈಕೆಗಳು.

  ಶ್ರೀ

  Reply

Leave a Reply

Your email address will not be published. Required fields are marked *