ಮಾಹಿತಿ ತಿಳಿದುಕೊಳ್ಳುವ ಗ್ರಾಹಕರ ಹಕ್ಕು

ಗ್ರಾಹಕ ಹಕ್ಕಿನ ಬಹುಮುಖ್ಯ ಹಕ್ಕು- Right to be informed(ಮಾಹಿತಿ ತಿಳಿದುಕೊಳ್ಳುವ ಹಕ್ಕು) ಬಳಕೆದಾರನಿಗೆ ತಾನು ಕೊಂಡ ವಸ್ತುವಿನ ಅಥವಾ ಸೇವೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಸಿಗಬೇಕು, ಹಾಗೆ ಮಾಹಿತಿ ತನ್ನ ಭಾಷೆಯಲ್ಲಿ ಸಿಕ್ಕಲ್ಲಿ ಬಳಕೆದಾರರು ವಂಚನೆಗೆ ಒಳಗಾಗುವುದು ಕಡಿಮೆಯಾಗುತ್ತದೆ.

ವಿಜಯಕರ್ನಾಟಕ ವರದಿಯ  ಪ್ರಕಾರ (12 ಡಿಸೆಂಬರ್ 2019 ) 67% ಭಾರತೀಯ ಬಳಕೆದಾರರು ಆನ್ ಲೈನ್ ವ್ಯವಹಾರದ ಷರತ್ತುಗಳನ್ನು ಓದೋದಿಲ್ಲವಂತೆ. ಹಾಗಾಗಿ ಆನ್ ಲೈನ್ ನಲ್ಲಿ ವಂಚನೆಗೆ ಒಳಗಾಗುತ್ತಾರೆ ಎನ್ನುತ್ತದೆ ಇಂದಿನ ವಿಜಯ ಕರ್ನಾಟಕದ ಈ ವರದಿ… ಒಂದು ಗಮನಿಸಿ, ಎಷ್ಟು ಜನರಿಗೆ ಇಂಗ್ಲೀಶ್ ನಲ್ಲಿ ಷರತ್ತುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯ? ಇಂಗ್ಲೀಶ್ ತಿಳಿದವರಿಗೆ ಮಾತ್ರ Right to be informed ಹಕ್ಕು ಇದೆಯೇ?

ಈಗಿನ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತೀಯ ಭಾಷೆಗಳಲ್ಲಿ ಎಲ್ಲಾ ಮಾಹಿತಿಯನ್ನೂ ನೀಡಬಹುದು, ಈಗಿರುವ ಬಹುಪಾಲು ಗ್ರಾಹಕ ಹಕ್ಕಿನ ಕಾನೂನುಗಳನ್ನು ಇಂಗ್ಲೀಶ್/ ಹಿಂದಿ ತಿಳಿದಿರುವ ಬಳಕೆದಾರರನ್ನು ಮಾತ್ರ ಲೆಕ್ಕಕ್ಕೆ ಇಟ್ಟುಕೊಂಡು ಮಾಡಲಾಗಿದೆ.

ಭಾಷೆಯ ಆಧಾರದ ಮೇಲೆ ವಿಂಗಡಿಸಿರುವ ಭಾರತದ ಪ್ರತಿ ರಾಜ್ಯದಲ್ಲೂ ದೊಡ್ಡ ಆನ್ ಲೈನ್ ಅಥವಾ ಅನ್ ಲೈನ್ ಆಚೆಗಿನ ಮಾರುಕಟ್ಟೆಯೇ ಇದೆ, ಒಂದೊಂದು ರಾಜ್ಯದ ಮಾರುಕಟ್ಟೆಯ ಗಾತ್ರ ಕೆಲವು ಯೂರೋಪ್ ದೇಶಗಳ ಮಾರುಕಟ್ಟೆಗಿಂತಲೂ ಹೆಚ್ಚು, ಹೀಗಿದ್ದೂ ಭಾರತೀಯ ಭಾಷೆಯಲ್ಲಿ ಮಾಹಿತಿ ಸಿಗಬೇಕು ಎಂದು ಸರಕಾರ ಗಟ್ಟಿಯಾದ ಒಂದು ಕಾನೂನು ಮಾಡುತ್ತಿಲ್ಲ ಎಂದರೆ ಸರಕಾರ ಬೇರೇನೋ ಹನ್ನಾರ ನಡೆಸುತ್ತಿದೆ ಎನ್ನುವುದು ಕಾಣಿಸುತ್ತಿದೆ.

Leave a Reply

Your email address will not be published. Required fields are marked *