ತಾರ್ಕಿಕ ಅಂತ್ಯದೆಡೆಗೆ ಡಬ್ಬಿಂಗ್ ಹೋರಾಟ

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ತಡೆಯೊಡ್ಡಿರುವ ಒಂದು ದೊಡ್ಡ ಇತಿಹಾಸವೇ ಇದೆ. ಸುಮಾರು 50 ವರುಷಗಳಿಂದ ಕನ್ನಡೇತರ ಚಿತ್ರಗಳು ಕನ್ನಡಕ್ಕೆ ಡಬ್ ಆಗುವುದನ್ನು ತಡೆ ಹಿಡಿದ ಕಾರಣ ಕನ್ನಡಿಗರಿಗೆ ಕನ್ನಡದಲ್ಲೇ ಮನರಂಜನೆ ಪಡೆಯುವ ಅವಕಾಶ ಇಲ್ಲದಾಗಿತ್ತು. ಇದರಿಂದ ಕನ್ನಡ ಸಮಾಜಕ್ಕೆ ಆಗುತ್ತಿರುವ ತೊಂದರೆಗಳನ್ನು ಗಮನಿಸಿದ ಕನ್ನಡ ಗ್ರಾಹಕರ ಕೂಟ 2011ರಲ್ಲಿ “ಪರಭಾಷೆಯಲ್ಲಿರುವ ಮನರಂಜನೆ ಕನ್ನಡಕ್ಕೆ ಡಬ್ ಆಗಲಿ” ಅನ್ನುವ ನಿಲುವನ್ನು ತಾಳಿ ಹೋರಾಟಕ್ಕೆ ಕಾಲಿಟ್ಟಿತು. ಸುಮಾರು 3 ವರುಷಗಳ ಸತತ ಕಾನೂನು ಹೋರಾಟದ ಬಳಿಕ 2015ರಲ್ಲಿ ಸಿಸಿಐ ನೀಡಿದ ತೀರ್ಪಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗದಂತೆ ತಡೆಯುವುದನ್ನು ತಪ್ಪೆಂದೂ, ಹಾಗೊಂದು ವೇಳೆ ಆ ರೀತಿ ತಡೆ ಒಡ್ಡುತ್ತಿದ್ದರೆ ಅದನ್ನು ಈಗಲೇ ನಿಲ್ಲಿಸಬೇಕೆಂದೂ, ಮುಂದೆಂದೂ ಹೀಗೆ ಮಾಡಬಾರದೆಂದೂ ಸಿಸಿಐ ತಿಳಿಸಿತ್ತು.

ಇದಾದ ಬಳಿಕ ಡಬ್ಬಿಂಗ್ ಚಿತ್ರಗಳನ್ನು ಬೆಂಬಲಿಸುವ ನಿರ್ಮಾಪಕರು ಡಬ್ಬಿಂಗ್ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದರು. ಎಲ್ಲಾ ಹಂತಗಳಲ್ಲೂ ಹಲವಾರು ತೊಡಕುಗಳನ್ನು ಎದುರಿಸಿಕೊಂಡೇ ಚಿತ್ರವನ್ನು ಮುಗಿಸಿ, ಸೆನ್ಸಾರ್ ಪತ್ರವನ್ನು ಪಡೆದು ಈಗ ಚಿತ್ರವನ್ನು ಬಿಡುಗಡೆಗೆ ಸಜ್ಜಾಗಿಸಿದ್ದಾರೆ.

13256513_1065555696849021_3927633462548001346_n

 

 

 

 

 

 

ಈ ಚಿತ್ರದ ಬಿಡುಗಡೆಯ ಮೂಲಕ ಕಳೆದ 5 ವರುಷಗಳಿಂದ ನಡೆದು ಬಂದ ಸತತವಾದ ಹೋರಾಟಕ್ಕೆ ಒಂದು ತಾರ್ಕಿಕ ಮುಕ್ತಾಯ ದೊರಕಿದೆ. ಈ ಹೋರಾಟದುದ್ದಕ್ಕೂ ನಮ್ಮನ್ನು ಬೆಂಬಲಿಸಿದವರು ಹಲವರಿದ್ದೀರಿ. ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರಕ್ಕೆ ಕನ್ನಡ ಗ್ರಾಹಕರ ಕೂಟ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತದೆ.