ತಂತ್ರಾಂಶದಲ್ಲಿ ಕನ್ನಡದ ಅಭಿವೃದ್ದಿ: ಕನ್ನಡ ಅಭಿವೃದ್ದಿ ಪ್ರಾಧಿಕಾರ

ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ತಂತ್ರಾಂಶದಲ್ಲಿ ಕನ್ನಡದ ಅಭಿವೃದ್ದಿ ಎನ್ನುವ ವಿಚಾರವಾಗಿ ಸಭೆಯೊಂದನ್ನು ವಿಧಾನ ಸೌಧದಲ್ಲಿ ಆಯೋಜಿಸಿಲಾಗಿತ್ತು, ಆ ಸಭೆಯಲ್ಲಿ ಕನ್ನಡ ಗ್ರಾಹಕರ ಕೂಟದಿಂದ ಅರುಣ್ ಜಾವಗಲ್ ಅವರು ಕೂಡ ಭಾಗವಹಿಸಿದ್ದರು.
ಒಂದು presentation ಮೂಲಕ ಕರ್ನಾಟಕ ಸರಕಾರದ ಕೆಲವು ಇಲಾಖೆ ಮತ್ತು ಸಂಸ್ಥೆಗಳ ವೆಬ್ ಸೈಟ್ ಗಳು, ಮೊಬೈಲ್ ಆಪ್ ಗಳು, ಚಾಟ್ ಬಾಟ್ ಗಳು ,ಮತ್ತು ಸಾಮಾಜಿಕಜಾಲ ತಾಣ ಇತ್ಯಾದಿ ಕಡೆಗಳಲ್ಲಿ ಕನ್ನಡದ ಬಳಕೆ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
ತಂತ್ರಜ್ಞಾನ ವೇಗವಾಗಿ ಮುಂದುವರೆಯುತ್ತಿದ್ದು,ಇರುವ ತಂತ್ರಜ್ಞಾನದ ಬಳಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ತಂತ್ರಾಂಶದಲ್ಲಿ ಕನ್ನಡದ ಸಾಧ್ಯತೆ ಹೆಚ್ಚುಮಾಡಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮುಯದಾಯವನ್ನುinvolve ಮಾಡುವ ಮತ್ತು ತಂತ್ರಜ್ಞಾನದಲ್ಲಿ ಕನ್ನಡದ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಲು ಸಲಹೆ ನೀಡಲಾಯಿತು.
ಕೊನೆಯಲ್ಲಿಕನ್ನಡ ಗ್ರಾಹಕರ ಪರವಾಗಿ ಕರ್ನಾಟಕ ಸರ್ಕಾರದ ಇಲಾಖೆ /ಸಂಸ್ಥೆಗಳು ವೆಬ್ಸೈಟು/ಆಪ್ ಇತ್ಯಾದಿ ಕಡೆಗಳಲ್ಲಿ ಕನ್ನಡವನ್ನು ಎಷ್ಟರ ಮಟ್ಟಿಗೆ ಬಳಕೆ ಮಾಡುತ್ತಿವೆ ಎನ್ನುವ ವಿಚಾರವಾಗಿ ಹಂತ ಹಂತವಾಗಿ ಮಾಹಿತಿ ನೀಡುವುದಾಗಿಯೂ,ಆ ಮೂಲಕ ತಂತ್ರಜ್ಞಾನದಲ್ಲಿ ಕನ್ನಡದ ಅನುಷ್ಠಾನದ ವಿಚಾರವಾಗಿ ಪ್ರಾಧಿಕಾರದ ಜೊತೆಗೆ ಕೈಜೋಡಿಸುವುದಾಗಿಯೂ ತಿಳಿಸಲಾಯಿತು.

Leave a Reply

Your email address will not be published. Required fields are marked *